ನಾನು ಮತ್ತು ನನ್ನ ಡೊಳ್ಳು

ನಾನು ಪ್ರಾರ್ಥನಾ ಶಾಲೆಯಲ್ಲಿ ಓದುತಿದ್ದೆ. ನಮ್ಮ ಶಾಲೆ ಶುರುವಾಗಿ ೧೦ ವರ್ಷಗಳಾಗಿದ್ದವು . ಡಿಸೆಂಬರ್ 28 ಮತ್ತು 29 , 2012 ರಂದು ದಶಮಾನೋತ್ಸವದ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಹಾಗಾಗಿ ನವೆಂಬರ್ ತಿಂಗಳಿಂದಲೇ ನೃತ್ಯ, ಹಾಡು, ಮಲ್ಲಕಂಭ, ನಾಟಕ ಮುಂತಾದ ಕಾರ್ಯಕ್ರಮಗಳ ತರಬೇತಿ ಏರ್ಪಡಿಸಲಾಗಿತ್ತು. ಪ್ರತಿಯೊಬ್ಬ ವಿದ್ಯಾರ್ಥಿಗೂ ಅವಕಾಶ ಸಿಗುವುದು ಎಂದು ಹೇಳಿದ್ದರು.

ನಾನು ಭರತನಾಟ್ಯ ಕಲಿತಿದ್ದರಿಂದ ನನ್ನನ್ನು ನೃತ್ಯ ವಿಭಾಗದಲ್ಲಿ ಸೇರಿಸಿಕೊಂಡರು. ಒಂದು ದಿನ ನನ್ನ ಶಿಕ್ಷಕಿಯಾದ ಗಾಯತ್ರಿ ಮೇಡಂ ‘ಹುಡುಗಿಯರಿಗಾಗಿ ಡೊಳ್ಳುಕುಣಿತವಿದೆ. ಇಷ್ಟವಿದ್ದವರು ಹೆಸರು ಕೊಡಿ’ ಎಂದು ನನ್ನ ತರಗತಿಯಲ್ಲಿ ಹೇಳಿದರು. ನನ್ನ ಸ್ನೇಹಿತೆಯರೆಲ್ಲರೂ ಅವರವರ ಹೆಸರುಗಳನ್ನು ಕೊಟ್ಟರು. ನಾನು ಕೂಡ ಪ್ರಯತ್ನಿಸ ಬೇಕೆಂದುಕೊಂಡು ನನ್ನ ಕೈಯನ್ನು ಎತ್ತಿದಾಗ ಎಲ್ಲರೂ ನಕ್ಕರು. ‘ಚಂದನಾ, ಜೋರಾಗಿ  ಗಾಳಿ ಬೀಸಿದರೆ ನೀನು ಅಳುತ್ತೀಯ. ಇನ್ನು ಡೊಳ್ಳನ್ನು ಹಿಡಿದು, ಅದನ್ನು ಬಾರಿಸುತ್ತಾ ಕುಣಿಯಲು ಸಾಧ್ಯವೇ’ ಎಂದು ಹೀಯಾಳಿಸಿದರು. ಆಗ ನಾನು ಎಷ್ಟು ಶಕ್ತಿವಂತೆ, ಧೈರ್ಯವಂತೆ ಎಂದು ಎಲ್ಲರಿಗೂ ತೋರಿಸಲಾದರೂ ಡೊಳ್ಳುಕುಣಿತವನ್ನು ಸೇರಲೇ ಬೇಕು ಎಂದು ನಿಶ್ಚಯಿಸಿದೆ.

ಎಲ್ಲಾ ಹುಡುಗಿಯರುನ್ನು ಪರೀಕ್ಷಿಸಲು ನಮಗೆ ಡೊಳ್ಳುಕುಣಿತ ಹೇಳಿಕೊಡಲು ಶಿವಮೊಗ್ಗದಿಂದ ಬಂದ ಬೂದಿಯಪ್ಪ ಸರ್ ಮತ್ತು ಸುರೇಶ್ ಸರ್ ಡೊಳ್ಳನ್ನು ಬಾರಿಸಿ, ಹಾಗೆಯೇ ಬಾರಿಸಲು ನಮಗೆ ಹೇಳಿದರು. ನಾನು ಇಲ್ಲಿ ನನ್ನ ಸ್ನೆಹಿತೆಯಾದ ಶ್ರೇಯಾಳ ಜೊತೆ ಬಂದಿದ್ದೆ. ನಾವು ನೃತ್ಯದಲ್ಲಿದ್ದ ಕಾರಣ ನಮ್ಮನ್ನು ಕೊನೆಯಲ್ಲಿ ತುಂಬಾ ಚೆನ್ನಾಗಿ ಡೊಳ್ಳನ್ನು ಬಾರಿಸಿದರೆ ಮಾತ್ರ ಸೇರಿಸಿಕೊಳ್ಳುವುದು ಎಂದು ಹೇಳಲಾಗಿತ್ತು. ಬಂದಿದ್ದ ಒಟ್ಟು 60 ಹುಡುಗಿಯರು ಪ್ರಯತ್ನಿಸಿದ ನಂತರ ನಮ್ಮ ಸರದಿ ಬಂದಿತು. ಮೊದಲು ಶ್ರೇಯಾ, ನಂತರ ನಾನು ಬಾರಿಸಿದೆ. ನಾನು ಬಾರಿಸಿದಾಗ ಬೂದಿಯಪ್ಪ ಸರ್ ನನ್ನನ್ನು ಹೊಗಳಿದರು.

ಮಾರನೇ ದಿನ ನಮಗೆ ಡೊಳ್ಳನ್ನು ಕಟ್ಟಿಕೊಂಡು ಕುಣಿಯಿರಿ ಎಂದು ಸರ್ ಹೇಳಿದರು. ಆ ಡೊಳ್ಳುಗಳನ್ನು ನೋಡಿ ನಾನು ಮೊದಲು ಹೆದರಿದೆ. ಇದನ್ನು ನನ್ನ ಸೊಂಟಕ್ಕೆ ಕಟ್ಟಿಕೊಡು ಕುಣಿಯುವುದು ನನ್ನ ಕನಸಿನಲ್ಲೆ ಸಾಧ್ಯ ಎಂದು ಭಾವಿಸಿದೆ. ‘ನಿನ್ನಿಂದಾಗುವುದಿಲ್ಲ, ಡೊಳ್ಳು ಬಾರವಾಗಿರುತ್ತೆ’ ಎಂದು  ನನ್ನನ್ನು ಎಲ್ಲರು ಹೆದರಿಸುತ್ತಿದ್ದರು. ಆದರೆ ಡೊಳ್ಳು ನಿಜವಾಗಿಯು ಭಾರವಾಗಿರಲ್ಲ. ನಾನು ಮತ್ತು ಶ್ರೇಯಾ ಇದರಲ್ಲಿ ಆಯ್ಕೆಯಾಗುವುದಷ್ಟೇ ಅಲ್ಲ, ನಮ್ಮ ಗುರುಗಳ ಹೊಗಳಿಕೆಗೆ ಕೂಡ ಪಾತ್ರರಾದೆವು. ನಮ್ಮ ಗುಂಪನ್ನು ನಾವಿಬ್ಬರೇ ಮುನ್ನಡೆಸಿದೆವು.

ಡೊಳ್ಳುಕುಣಿತಕ್ಕೆ ನಾವು ಆಯ್ಕೆಯಾಗಿದ್ದೇವೆ ಎಂದು ತಿಳಿದ ತಕ್ಷಣ ನಮ್ಮನ್ನು ನೃತ್ಯದಿಂದ ತೆಗೆಯಲ್ಲಿದ್ದಾರೆ ಎಂಬ ಸುದ್ದಿ ಕೇಳಿ ಬಂದಿತು. ನಮ್ಮ ಪ್ರಾಂಶುಪಾಲರು, ‘ಡೊಳ್ಳುಕುಣಿತ ಅಭ್ಯಾಸ ಮಾಡಲು ಇಡೀ ದಿನವೇ ಬೇಕು. ಆಗ ನೀವು ನೃತ್ಯವನ್ನು ಅಭ್ಯಾಸ ಮಾಡಲು ಸಾಧ್ಯವಾಗುವುದಿಲ್ಲ. ಯಾವುದಾದರು ಒಂದನ್ನು ಆರಿಸಿಕೊಳ್ಳಿ’ ಎಂದರು. ಆಗ ನಾನು ಮತ್ತು ಶ್ರೇಯಾ ಡೊಳ್ಳುಕುಣಿತವನ್ನು ಸೇರಲು ತೀರ್ಮಾನಿಸಿದೆವು. ನಮ್ಮ ಈ ತೀರ್ಮಾನ ಇಡೀ ಶಾಲೆಯನ್ನೇ ಅಚ್ಚರಿಗೊಳಿಸಿತು.

ಶಾಲೆಗೆ ಹೋದಾಗಿಂದ ಸಂಜೆಯವರೆಗೆ ಡೊಳ್ಳುಕುಣಿತವನ್ನು ಅಭ್ಯಾಸ ಮಾಡಿದೆವು. ನಾವು ಮಾಡುತ್ತಿದ್ದನ್ನು ಎಲ್ಲರೂ ಮೆಚ್ಚುತ್ತಿದ್ದರು. ಹೀಗೆ ಎರಡು ವಾರ ಡೊಳ್ಳುಕುಣಿತವನ್ನು ಅಭ್ಯಾಸಮಾಡಿದೆವು. ಈ ಮಧ್ಯೆ ಹತ್ತನೇ ತರಗತಿಯವರಿಗೆ ಪ್ರಿಪರೇಟರಿ ಪರೀಕ್ಷೆಯನ್ನೂ ಇಟ್ಟಿದ್ದರು. ಪರೀಕ್ಷೆಯನ್ನು ಬೆಳಿಗ್ಗೆ ಬರದು, ಸಂಜೆ ಐದರವರೆಗೆ ಡೊಳ್ಳುಕುಣಿತವನ್ನು ಮಾಡುತ್ತಿದ್ದೆವು.

ನನ್ನ ಸ್ನೇಹಿತರು ನಾನು ಡೊಳ್ಳುಕುಣಿತ ಮಾಡುತಿದ್ದದ್ದನ್ನು ನೋಡಿ ಬೆರಗಾಗಿದ್ದರು. ನಾನೇ ಗುಂಪನ್ನು ಮುನ್ನಡೆಸುವುದು ಎಂದು ತಿಳಿದಾಗ ಎಲ್ಲರು ಗಾಬರಿಯಾಗಿದ್ದರು. ನಾನು ವೇದಿಕೆಯ ಮೇಲೆ ಡೊಳ್ಳುಕುಣಿತ ಮಾಡುತ್ತಿದ್ದಾಗ ಇಡೀ ಶಾಲೆ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸುತ್ತಿತ್ತು. ನಾನು ಎಲ್ಲರ ಮೆಚ್ಚುಗೆಗೆ ಪಾತ್ರಳಾದೆ. ಇಂತಹ ಖುಷಿ ನನಗೆ ಯಾವ ಕೆಲಸದಿಂದ ಕೂಡ ಸಿಕ್ಕಿರಲಿಲ್ಲ. ಡೋಳ್ಳುಕುಣಿತ ಮಾಡಿದಾಗಲಿಂದ ನಾನು ಖುಷಿಯಿಂದ ಬೀಗುತ್ತಿದ್ದೇನೆ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s