ಗಾಳಿಪಟ

ಅಂದು 3 ನೇ ಜೂನ್. ರಾಹುಲ್ ಅಂದು ತನ್ನ ಎಂಟನೇ ಹುಟ್ಟುಹಬ್ಬವನ್ನು ಆಚರಿಸಿಕೊಳುತ್ತಿದ್ದ. ಅವನ ಅಪ್ಪಾ-ಅಮ್ಮ ಅವನಿಗೆ ಕೇಕ್ ಅನ್ನು ತಂದಿದ್ದರು. ರಾಹುಲ್ ತುಂಬಾ ಖುಷಿಯಾಗಿದ್ದ. ತನ್ನ ಗೆಳೆಯರೊಡನೆ ಆಟವಾಡುತ್ತಿದ್ದ. ಅವನಿಗೆ ಸಿಕ್ಕಿದ್ದ ಎಲ್ಲಾ ಉಡುಗೊರೆಗಳನ್ನು ತೆಗೆದು, ಅದನ್ನು ಪ್ರೀತಿಯಿಂದ ಎತ್ತಿಡುತ್ತಿದ್ದ.

ಮಾರನೆ ದಿನ ಮನೆಯಲ್ಲಿ ರಾಹುಲ್ನ್ ಅಮ್ಮ ಅವನಿಗೆ ” ಅಪ್ಪ ನಾಳೆ ಬೇರೂರಿಗೆ ಹೊಗ್ಬೆಕು. ನಾನು ಅವರನ್ನ ಬಿಟ್ಟು ಬರ್ತಿನಿ” ಎಂದ್ರು. ರಾಹುಲ್ “ಹೂಂ. ಬಾಯ್ ಹಾಪಿ ಜರ್ನಿ” ಎಂದು ಆಟ ಆಡ್ಕೊಂಡಿದ್ದ.

ಸಂಜೆ ರಾಹುಲ್ನ ಚಿಕ್ಕಪ್ಪ(ವಿಜಯ್) ಬಂದು ಅವನನ್ನು ಅವರ ಮನೆಗೆ ಕರೆದುಕೊಂಡು ಹೋದ್ರು. ವಿಜಯ್ ಮನೆಯಲ್ಲಿ ತುಂಬಾ ಜನರಿದ್ರು. ಎಲ್ಲರು ಅಳು ಮುಖ ಮಾಡ್ಕೊಂಡು ಕೂತಿದ್ರು. ವಿಜಯ್ ರಾಹುಲ್ನನ್ನು ರೂಂನಲ್ಲಿ ಮಲಗಿಸಿದ್ರು. ರಾಹುಲ್ ರಾತ್ರಿ ಎದ್ದಾಗ ಅವನ ಅಪ್ಪ-ಅಮ್ಮನ ಫೊಟೊಗಳಿಗೆ ಹಾರ ಹಾಕಿ ಎಲ್ಲರು ಅಳುತ್ತಿದ್ರು.

ರಾಹುಲ್ಗೆ ಊಟ ಮಾಡಿಸಿ ಅವನ ಚಿಕ್ಕಮ್ಮ(ಉಮಾ) ಅವನನ್ನು ಮಲಗಿಸಿದರು. ಬೆಳಿಗ್ಗೆ ಅವನು ಎದ್ದಾಗ ಉಮಾ ಅವನಿಗೆ ಹಾಲು ಕುದಿಸಲು ಬಂದುಳು. ಆದ್ರೆ ರಾಹುಲ್ ಅಮ್ಮ ಬೇಕು ಎಂದು ಅಳುತಿದ್ದ. ರಾಹುಲ್ ಉಮಾಗೆ ” ಆಮ್ಮ ಯಾಕಿನ್ನು ಬಂದಿಲ್ಲ? ಅಮ್ಮ ನಂಗೆ ಸಂಜೆ ಒಳ್ಗೆ ಬರ್ತಿನಿ ಅಂಥ ಹೇಳಿ ಹೋಗಿದ್ರು. ಇನ್ನು ಬಂದಿಲ್ಲ, ಯಾಕೆ?” ಅಂತ ಕೇಳಿದ. ಉಮಾ ಅಳು ತಡಿಯಲಾರದೆ ಓಡಿ ಹೋದ್ಲು.

ಮನೆಕೆಲ್ಸ್ದದವಳು ರಾಹುಲ್ಗೆ “ನಿನ್ನ ಅಪ್ಪ-ಅಮ್ಮ ದೇವ್ರ್ ಹತ್ತಿರ ಹೋಗಿದ್ದಾರೆ. ದೇವ್ರು ಅವ್ರ್ನ ಬಿಡೊದಿಲ್ವ್ಂತೆ. ನೀನು ಬೇಗ ಸ್ನಾನ ಮಡ್ಕೊಂಡು ಸ್ಕೂಲ್ಗೆ ಹೊರಡು.” ಎಂದಳು. ರಾಹುಲ್ “ಸರಿ. ಆದ್ರೆ ದೇವ್ರಿಗ್ ಗೊತ್ತಿಲ್ವಾ ನಾನು ಅಪ್ಪ-ಅಮ್ಮ ಇಲ್ದೆ ಒಬ್ನೆ ಅಗ್ತೀನಿ ಅಂತ?” ಎಂದು ಅವಳಿಗೆ ಕೇಳ್ತಾನೆ. ಆವಳಿಗೆ ಏನೂ ಹೇಳಲು ಸಾಧ್ಯವಾಗದೆ ಸುಮ್ನೆಯಾಗುವಳು.

ಸಂಜೆಯಾಗುವಶ್ಟರಲ್ಲಿ ರಾಹುಲ್ ಅವನ ಅಪ್ಪ-ಅಮ್ಮನಿಲ್ಲದೆ ಒಬಂಟಿಯಾಗುತ್ತಾನೆ. ಅವನು ವಿಜಯ್ ಬಳಿ ಹೋಗಿ “ನನಗೆ ಒಂದು ಗಾಳಿಪಟ ಬೇಕು” ಅಂತ ಕೇಳುತ್ತಾನೆ. ವಿಜಯ್ ತನ್ನ ಅಣ್ಣನನ್ನು ಕೆಳೆದುಕೊಂಡ ದುಃಖದಲ್ಲಿ ರಾಹುಲ್ನ ಮಾತನ್ನು ಲೆಕ್ಕಿಸದೆ ಉಮಳನ್ನು ಕರೆದು ರಾಹುಲ್ನನ್ನು ಮಲಗಿಸಲು ಹೇಳುತ್ತಾನೆ. ಉಮಾ ಅವನನ್ನು ಮಲಗಿಸಿ, ದೀಪಗಳನ್ನು ಆರಿಸಿ ಹೋಗುತ್ತಾಳೆ.

ರಾಹುಲ್ ನಿದ್ದೆ ಮಾಡಲಾರದೆ, ಏಳುತ್ತಾನೆ. ರಾಹುಲ್ ಅವನ ಚಿಕ್ಕಪ್ಪನ ಶರ್ಟ್ನ್ನಿಂದ ದುಡ್ದನ್ನು ಕದಿಯುತ್ತಾನೆ. ಆ ದುಡ್ಡನ್ನು ಕೆಲ್ಸಮ್ಮನ ಮಗ ರಾಮನಿಗೆ ಕೊಟ್ಟು “ನಂಗೆ ಈಗ್ಲೆ ಒಂದ್ ಗಾಳಿಪಟ ಮತ್ತೆ ದಾರ ತೊಗೊಂಡು ಬಾ” ಎನ್ನುತ್ತಾನೆ. ರಾಮ ಅಂಗಡಿಯಿಂದ ರಾಹುಲ್ಗಾಗಿ ಗಾಳಿಪಟ ಮತ್ತು ದಾರವನ್ನು ತರುತ್ತಾನೆ. ಅವನು ರಾಹುಲ್ಗೆ “ಇದೆಲ್ಲಾ ಯಾಕ್ ತರ್ಸಿದ್ದು?” ಅಂತ ಕೇಳಿದಾಗ ರಾಹುಲ್ “ಕೆಲ್ಸ್ದಮ್ಮ ಹೇಳ್ತಿದ್ರು ಅಪ್ಪ-ಅಮ್ಮನ ದೇವ್ರು ಅವ್ರ ಬಳಿ ಇಟ್ಕೊಂಡಿದ್ದಾರಂತೆ. ಅದಕ್ಕೆ ನಾನು ಈ ಗಾಳಿಪಟನ ಹಾರ್ಸಿ ಅಪ್ಪ,ಅಮ್ಮನ ದೇವ್ರಿಗ್ ಗೊತ್ತಾಗ್ದೆ ಕೆಳ್ಗಿಸ್ಕೊತ್ತೀನಿ.” ಅಂತ ನಗುತ್ತಾನೆ. ರಾಮ ಯೋಚನೆಮಾಡಿ “ನಿನ್ನ ಈ ಇಡಿಯಾ ಚೆನ್ನಾಗಿದೆ. ಆದ್ರೆ ಈ ಸಣ್ಣ ದಾರದಿಂದ ನಿಮ್ ಅಪ್ಪ-ಅಮ್ಮ ಕೆಳಗೆ ಹೇಗ್ ಬರ್ತ್ತಾರೆ? ಮುಂಚೆ ಹೇಳಿದ್ರೆ ನಾನು ದಪ್ಪ ಹಗ್ಗಾನೆ ತರ್ತ್ತಿದ್ದೆ.” ಒಂದು ಹೇಳುವನು. ರಾಹುಲ್ “ಸರಿ. ಹಾಗೆ ಮಾಡು. ನಾನು ನಿಂಗ್ ದುಡ್ದ್ ಕೊಡ್ತೀನಿ” ಎಂದು ಹೇಳಿ, ಮತ್ತೆ ವಿಜಯ್ ನ ಶರ್ಟ್ನಿಂದ ದುಡ್ಡನ್ನು ಕದಿಯುತ್ತಾನೆ.

ರಾಮು ಅಂಗಡಿಯಿಂದ ಹಗ್ಗವನ್ನು ತಂದು ರಾಹುಲಿನ ಜೊತೆ ಕೂತು ಗಾಳಿಪಟವನ್ನು ತಯಾರಿಸುತ್ತಾರೆ. ರಾಹುಲ್ ಗಾಳಿಪಟದ ಮೇಲೆ ರಾಹುಲ್ನ ಅಪ್ಪ-ಅಮ್ಮಯೆಂದು ಬರೆಯುತ್ತಾನೆ. ರಾಮು “ಹೀಗ್ಯಾಕೆ ಬರೀತಿದ್ದ್ಯಾ?” ಎಂದು ಕೆಳಿದಾಗ ರಾಹುಲ್ “ಹೀಗ್ ಬರೀದೆ ಇದ್ರೆ ಬೇರೆಯಾರ್ದೊ ಅಪ್ಪ-ಅಮ್ಮ ಕೆಳಗ್ ಬರ್ತ್ತರೆ. ನಾನಿಲ್ಲಿ ನನ್ನ್ ಹೆಸ್ರು ಬರ್ದಿದ್ದೀನಲ್ಲಾ ಅಪ್ಪ-ಅಮ್ಮಾಗೆ ಗೊತ್ತಾಗತ್ತೆ, ಆಗ ಅವ್ರೆ ವಾಪಸ್ ಬರ್ತ್ತಾರೆ!” ಅಂತ ಹೇಳುತ್ತಾನೆ. ರಾಮು “ಒಳ್ಳೆ ಐಡಿಯಾ. ಈಗಂತು ಪಟನ ಹಾರ್ಸಕಾಗಲ್ಲ. ನಾಳೆ ಹಾರ್ಸೋಣ. ಈಗ ಮಲ್ಕೊಳಣ.” ಎನ್ನುತಾನೆ. ಇಬ್ಬ್ರು ರೂಂನಿಂದ ಹೊರಗೆ ಹೋಗುತ್ತಿದ್ದ ಹಾಗೆ ಎದುರುಗಡೆ ವಿಜಯ್ ಬರುತ್ತಾನೆ. ಅವನು “ರಾಮು ದುಡ್ಡೆಲ್ಲಿ?” ಅಂತ ಕೇಳುತ್ತಾನೆ. ರಾಮು “ನಂಗೊತ್ತಿಲ್ಲ” ಎಂದಾಗ ವಿಜಯ್ ಕೋಪವನ್ನು ತಡಿಯ್ಲಾರ್ದೆ ರಾಮುವನ್ನು ಹೊಡೆಯುತ್ತಾನೆ. ಆಗ ರಾಮು ಅಳುತ್ತಾ “ನಾನಲ್ಲ ಕದ್ದಿದ್ದು. ರಾಹುಲ್ ಕದ್ದಿದ್ದು ದುಡ್ಡನ್ನ…ಈ ಗಾಳಿಪಟ ಕೊಂಡ್ಕೊಳೊದಕ್ಕೆ.” ಎನ್ನುತ್ತಾನೆ. ವಿಜಯ್ ಆಗ ಗಾಳಿಪಟಕ್ಕೆ ಕಟ್ಟಿದ್ದ ಹುಗ್ಗವನ್ನು ನೋಡಿ ಕೋಪದಿಂದ ರಾಹುಲ್ಗೆ ಕೇಳುತ್ತಾನೆ “ರಾಹುಲ್  ಯಾಕೆ ಕದ್ದೆ?” ಆಗ ರಾಹುಲ್ ಅಳುತ್ತ “ಕೆಲ್ಸ್ದಮ್ಮ ಹೇಳಿದ್ಲು ಅಪ್ಪ-ಅಮ್ಮನ ದೇವ್ರು ಇಟ್ಕೊಂಡಿದ್ದಾರಂತೆ. ಅದಕ್ಕೆ ಆ ದೇವ್ರಿಗ್ ಗೊತ್ತಾಗ್ದೆ ಅಪ್ಪ-ಅಮ್ಮನ ಕೆಳಗ್ ಕರ್ಕೊಂಡ್ ಬರೋದಕ್ಕೆ ಈ ಗಾಳಿಪಟನ ಹಾರ್ಸತಿದ್ದೆ. ಗಾಳಿಪಟ ಕೊಂಡ್ಕೊಬೇಕು ದುಡ್ಡು ಕೊಡಿ ಅಂದ್ರೆ ನೀವು ಕೊಡ್ಲಿಲ್ಲ. ಅದಕ್ಕೆ ಕದ್ದೆ” ಎನ್ನುವನು. ವಿಜಯ್ ರಾಹುಲನ ಮಾತಿನಲ್ಲಿರುವ ಮುಗ್ಧತೆಯನ್ನು ಕೇಳಿ ಬೆರಗಾಗಿ ನಿಂತನು.